ವಿದ್ಯಾರ್ಥಿಗಳು ಓದುವ ಸಂಸ್ಕೃತಿಗೆ ಮರಳಬೇಕಿದೆ: ಅಂಶಿಈ ಹಿಂದೆ ಓದುವ ಹವ್ಯಾಸ ಸಹಜವಾಗಿ ಎಲ್ಲರಲ್ಲೂ ಇತ್ತು. ವಿದ್ಯಾರ್ಥಿಜೀವನದಲ್ಲಿ ಮಹನೀಯರ ಜೀವನಗಾಥೆ, ನಾಟಕ, ಕಲೆ,ಸಾಹಿತ್ಯ, ಸಂಸ್ಕೃತಿ, ಪ್ರಚಲಿತ ವಿದ್ಯಮಾನ ಎಲ್ಲವನ್ನೂ ಓದುತ್ತಿದ್ದರು. ಆದರೆ ಇದೀಗ ಆಧುನಿಕ ತಂತ್ರಜ್ಞಾನ ನಮಗೆ ಬೆರಳ ತುದಿಯಲ್ಲೇ ಮಾಹಿತಿಯನ್ನು ನೀಡುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಕೇಳುವ ಮತ್ತು ನೋಡುವ ಸಂಸ್ಕೃತಿಗೆ ಸಿಕ್ಕುಬಿದ್ದಿದ್ದಾರೆ.