ಮೈಸೂರು ವಿವಿ: 107.72 ಕೋಟಿ ಕೊರತೆ ಬಜೆಟ್ಮೈಸೂರು ವಿವಿಯ ಆಯವ್ಯಯ ಅಂದಾಜಿನಲ್ಲಿ ಖಾಯಂ ಸಿಬ್ಬಂದಿ ವೇತನ ಮತ್ತು ಪಿಂಚಣಿಗಳ ಅನುದಾನದ ಕುರಿತಾಗಿ ರಾಜ್ಯ ಸರ್ಕಾರದಿಂದ ಒಟ್ಟಾರೆ 177,68,71,000 (ವೇತನಾನುದಾನ 127,68,71,000 ಮತ್ತು ಪಿಂಚಣಿ ಅನುದಾನ 50 ಕೋಟಿ ರು.) ಮಂಜೂರಾಗಿದೆ. 2025-26ನೇ ಸಾಲಿಗೆ ಅಭಿವೃದ್ಧಿ ಅನುದಾನ 3 ಕೋಟಿ ರು. ಮತ್ತು ಪ.ಜಾತಿ, ಪ.ಪಂಗಡ ವಿದ್ಯಾರ್ಥಿಗಳಿಗೆ 4 ಕೋಟಿ ರು. ಅನುದಾನ ಮಂಜೂರಾತಿಯನ್ನು ರಾಜ್ಯ ಸರ್ಕಾರದಿಂದ ನಿರೀಕ್ಷಿಸಿ, ಒಟ್ಟಾರೆ 184,68,71,000 ರು. ಅದಾಯವಾಗಿ ಪರಿಗಣಿಸಲಾಗಿದೆ.