ಇತ್ತೀಚಿಗೆ ಚಿತ್ರರಂಗಕ್ಕೆ ಉತ್ತಮ ಬರಹಗಾರರ ಕೊರತೆ ಇದೆ: ಮಿಲನಾ ನಾಗರಾಜ್ಈ ಬಾರಿಯ ಸಿನಿರಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ದೇಶಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಹಾಗೂ ಫಿಲ್ಮ್ ಮೇಕಿಂಗ್ ಸ್ಕೂಲ್ ಗಳು ಭಾಗವಹಿಸಿದ್ದವು. 70 ಹೆಚ್ಚು ಕಿರುಚಿತ್ರಗಳು ಈ ಕಿರುಚಿತ್ರೋತ್ಸವದಲ್ಲಿ ನೋಂದಣಿಗೊಂಡಿದ್ದು, ಟಾಪ್ ಕಿರುಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು. ಕಿರುಚಿತ್ರ ಸ್ಪರ್ಧೆಯ ವಿಜೇತರಿಗೆ ಸುಮಾರು 1 ಲಕ್ಷ ರು. ಮೌಲ್ಯದ ಬಹುಮಾನವನ್ನು ನೀಡಲಾಯಿತು.