ಮೈಸೂರಿನಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಡಗರಮಹಿಳೆಯರು ಮನೆಯನ್ನು ಸ್ವಚ್ಛಗೊಳಿಸಿ ದೇವರ ಮನೆ ಅಥವಾ ಮನೆಯ ಆವರಣದಲ್ಲಿ ಅಷ್ಟಲಕ್ಷ್ಮಿಯರನ್ನು ಪೂಜಿಸಿ ಸುಖ, ಶಾಂತಿ, ನೆಮ್ಮದಿ, ಧನ ಸಂಪತ್ತಿಗಾಗಿ ಪ್ರಾರ್ಥಿಸಿದರು. ಮನೆಯಲ್ಲಿ ಕಳಸ ಪ್ರತಿಷ್ಠಾಪನೆ ಮಾಡಿ, ಅದಕ್ಕೆ ಲಕ್ಷ್ಮಿಯ ಮುಖವಾಡ, ಸೀರೆ, ಬಳೆ ತೊಡಿಸಿ, ಬಗೆ ಬಗೆಯ ಹೂವುಗಳಿಂದ ಅಲಂಕಾರ ಮಾಡಿ, ವಿವಿಧ ತಿನಿಸುಗಳು, ಹಣ್ಣುಗಳನ್ನು ನೈವೇದ್ಯಕ್ಕಿಟ್ಟು, ಮನೆಯಲ್ಲಿರುವ ಹಣ, ಚಿನ್ನದೊಡವೆಗಳನ್ನು ದೇವರ ಮುಂದಿಟ್ಟು ನಮ್ಮ ಮನೆಯಲ್ಲಿ ಸದಾ ನೆಲೆಸಿರುವಂತೆ ಪ್ರಾರ್ಥಿಸಿದರು.