ಉತ್ತರಾದಿ ಮಠದಲ್ಲಿ ಸಂಭ್ರಮದ ರಾಮೋತ್ಸವ - ವಿಜೃಂಭಣೆಯ ಪಲ್ಲಕ್ಕಿ ಸೇವೆ- ದೀಪೋತ್ಸವಅಗ್ರಹಾರದ ಪ್ರಮುಖ ರಸ್ತೆಗಳಲ್ಲಿ ರಾಮದೇವರ ಪಲ್ಲಕ್ಕಿ ಸಾಗಿತು. ಮಂಗಳವಾದ್ಯಗಳು ಮೊಳಗಿದವು. ಪಟಾಕಿ, ಬಾಣ, ಬಿರುಸುಗಳ ಪ್ರದರ್ಶನ ಗಮನ ಸೆಳೆಯಿತು. ಹಲವು ಮಕ್ಕಳು ಬಾಲ ರಾಮ, ಕೃಷ್ಣ, ಸೀತೆ, ಆಂಜನೇಯ ವೇಶಭೂಷಣ ಧರಿಸಿ ಗಮನ ಸೆಳೆದರು. ಮಾತೆಯರು ದೇವರ ನಾಮ ಪಠಿಸಿ ರಾಮನಿಗೆ ಆರತಿ ಬೆಳಗಿದರು. ಪುರುಷರು ವೇದ ಮಂತ್ರ ಘೋಷ ಮಾಡಿದರು. ಹಲವಾರು ಪಂಡಿತರು, ವಿದ್ವಾಂಸರು ಹಾಜರಿದ್ದು, ಪಲ್ಲಕ್ಕಿ ಸೇವೆ ಮಾಡಿದರು.