• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mysore

mysore

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಏಳು ದಶಕ ಕಳೆದರೂ ಹಾಗೇ ಉಳಿದ ನಾಡು, ನುಡಿ ಸಮಸ್ಯೆ
ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆಯುತ್ತಾ ಬಂದರೂ ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳು ಹಾಗೆಯೇ ಉಳಿದಿವೆ. ಕೆಲವೂ ಇನ್ನು ಹೆಚ್ಚು ಗಂಭೀರವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದ ಅವರು, ಗಡಿ ವಿವಾದ, ನೆರೆ ರಾಜ್ಯಗಳೊಂದಿಗಿನ ನೀರಿನ ಹಂಚಿಕೆ, ಮಣ್ಣಿನ ಮಕ್ಕಳಿಗೆ ಉದ್ಯೋಗದ ಆದ್ಯತೆ, ಮಾತೃಭಾಷೆಯಲ್ಲಿ ಶಿಕ್ಷಣ ಮುಂತಾದವುಗಳು ಸವಾಲುಗಳಾಗಿಯೇ ಮುಂದುವರಿದಿವೆ ಎಂದರು.
ಇಂಗ್ಲೀಶ್‌ ವ್ಯಾಮೋಹದಿಂದಾಗಿ ಕನ್ನಡ ಮರೆಯುತ್ತಿರುವುದು ವಿಷಾದನೀಯ
ಇಂಗ್ಲೀಶ್‌ ಮೇಲಿನ ವ್ಯಾಮೋಹದಿಂದಾಗಿ ಕನ್ನಡವನ್ನು ಮರೆಯುತ್ತಿರುವುದು ವಿಷಾದನೀಯ. ಪ್ರಾಚೀನ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಮುಂದಿನ ತಲೆಮಾರಿಗೂ ಕೊಡುವ ಕಾರ್ಯ ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಬುಧವಾರ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
- ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಎಲ್ಲ ಧರ್ಮದವರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ಪಟ್ಟಣದ ಸಂವಿಧಾನ ಸೌಧದಲ್ಲಿ ಬುಧವಾರ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕವೆಂದರೆ ಸರ್ವ ಧರ್ಮೀಯರು ಪ್ರೀತಿಸುವ ನೆಲವೆಂದರು. ಹಿಂದುಳಿದ ಜನಾಂಗದ ಬಗ್ಗೆ ಅಪಾರವಾದ ಕಾಳಜಿಯಿಟ್ಟುಕೊಂಡಿದ್ದ ಧೀಮಂತ ನಾಯಕ, ಹಿಂದುಳಿದ ವರ್ಗಗಳ ಹರಿಕಾರ ದಿವಂಗತ ಡಿ.ದೇವರಾಜ ಅರಸುರವರು ಮೈಸೂರನ್ನು ಕರ್ನಾಟಕವೆಂದು ನಾಮಕರಣ ಮಾಡಿ ಇಂದಿಗೆ ಐವತ್ತು ವರ್ಷಗಳಾಗಿದೆ. ಭಾರತದ ಭೂಪಟದಲ್ಲಿ ಕರ್ನಾಟಕ ರಾಜ್ಯಕ್ಕೆ ಅತ್ಯುತ್ತಮವಾದ ಸ್ಥಾನವಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ. ಭಾರತದ ಯಾವ ರಾಜ್ಯಕ್ಕೂ ಇಷ್ಟೊಂದು ಜ್ಞಾನಪೀಠ ಪ್ರಶಸ್ತಿಗಳು ದೊರತಿಲ್ಲವೆಂದರು.
ಹೊಸದುರ್ಗ ಸಂಚಾರಿ ನಿರೀಕ್ಷಕರಿಂದ ಸಿಬ್ಬಂದಿಗೆ ಕಿರುಕುಳ ಆರೋಪ
ಬಿಎಂಟಿಸಿ ಸಿಬ್ಬಂದಿಗೆ ನಿರ್ದಿಷ್ಟ ಮಾರ್ಗ ನೀಡಲು, ಉತ್ತಮ ಗುಣಮಟ್ಟದ ಬಸ್ಸುಗಳನ್ನು ಒದಗಿಸಲು ಹಾಗೂ ರಜೆ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ 7 ಜನರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಮಾನತು ಮಾಡಿದ ಬೆನ್ನಲ್ಲೇ, ಇಂಥದ್ದೊಂದು ಪ್ರಕರಣಕ್ಕೆ ಪುಷ್ಟಿ ನೀಡುವಂತೆ ಹೊಸದುರ್ಗ ಕೆಎಸ್ಆರ್‌ಟಿಸಿ ಡಿಪೋದಲ್ಲಿ ಲಂಚಾವತಾರದ ಸದ್ದು ಕೇಳಿ ಬಂದಿದೆ. ಇಲ್ಲಿನ ಕೆ.ಎಸ್.ಆರ್.ಟಿ.ಸಿ ಡಿಪೋ ಅಧಿಕಾರಿಯೊಬ್ಬ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಸಿಬ್ಬಂದಿಯಿಂದ ಲಂಚ ಪಡೆಯುತ್ತಿರುವುದಾಗಿ ಮತ್ತು ಅವರ ಕಿರುಕುಳಕ್ಕೆ ಬೇಸತ್ತು ನಮಗೆ ನ್ಯಾಯ ಒದಗಿಸಿ ಎಂದು ಪರಿಪರಿಯಾಗಿ ಬೇಡಿಕೊಳ್ಳುವ ಸಂದೇಶವೊಂದು ವಾಟ್ಪ್ಸಾ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ.
ದ್ವಾರಕಾನಾಥ್ ಸೇರಿ 28 ಮಂದಿಗೆ ರಾಜ್ಯೋತ್ಸವ ಸನ್ಮಾನ
ಕನ್ನಡಪ್ರಭದ ಛಾಯಾಗ್ರಾಹಕ ದ್ವಾರಕನಾಥ್, ಅಂಧರ ಮಹಿಳಾ ಕ್ರಿಕೆಟ್ ತಂಡದ ನಾಯಕಿ ವರ್ಷಾ ಸೇರಿದಂತೆ 28 ಮಂದಿ ಸಾಧಕರಿಗೆ ಈ ಬಾರಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನವೆಂಬರ್ ಒಂದರಂದು ಜಿಲ್ಲಾ ಕೇಂದ್ರದಲ್ಲಿ ಜರುಗುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಗುವುದೆಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದ್ದಾರೆ.
ಅಧಿಕಾರಿಗಳು ಇತಿಮಿತಿ ಅರಿತು ಕೆಲಸ ಮಾಡಿ
ಕಚೇರಿಗಳಿಗೆ ಬರುವ ಜನ ಸಾಮಾನ್ಯರನ್ನು ಅಲೆದಾಡಿಸಬೇಡಿ. ತಮ್ಮ ಇತಿಮಿತಿಯನ್ನು ಅರಿತು ಕೆಲಸ ಮಾಡಿ. ಇಲ್ಲಿಯವರೆಗೆ ಹೇಗೆ ಕೆಲಸ ಮಾಡಿದ್ದೀರಾ ಎನ್ನುವುದು ಬೇಡ. ಇನ್ನು ಮುಂದೆ ಹೇಗೆ ಕೆಲಸ ಮಾಡುತ್ತೀರಾ ಎನ್ನುವುದು ಮುಖ್ಯ. ಒಂದು ವೇಳೆ ಕೆಲಸ ಮಾಡಲು ಇಷ್ಠವಿಲ್ಲದಿದ್ದರೆ ನೀವಾಗಿಯೇ ನನ್ನ ಕ್ಷೇತ್ರದಿಂದ ಹೊರಟು ಹೋಗಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.
ಮೈಸೂರು ರಾಜ್ಯ ಕರ್ನಾಟಕವಾಗಿ ಇಂದಿಗೆ 50 ವರ್ಷ
ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಕೋಟೆ ನಾಡು ಚಿತ್ರದುರ್ಗ ರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾಗಿದೆ. ವಿಜೃಂಭಣೆ ಹಾಗೂ ಅರ್ಥಪೂರ್ಣ ಆಚರಣೆಗೆ ಸಕಲ ಸಿದ್ಧತೆಗಳು ನಡೆದಿದೆ. ನಗರದ ಪೊಲೀಸ್ ಕವಾಯತು ಮೈದಾನ ಸಿಂಗಾರಗೊಂಡಿದೆ. ವೇದಿಕೆಯು ಹಳದಿ ಮತ್ತು ಕೆಂಪು ಬಣ್ಣದ ಬಗೆ ಬಗೆಯ ವಿನ್ಯಾಸದಿಂದ ಅಲಂಕೃತಗೊಂಡಿದ್ದು, ಇಡೀ ಮೈದಾನದಲ್ಲಿ ಕನ್ನಡ ಬಾವುಟ, ಕನ್ನಡ ನಾಡು ನುಡಿ ಬಿಂಬಿಸುವ ರೀತಿ ಸಜ್ಜುಗೊಂಡಿದ್ದು ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ.
ರಂಗಕರ್ಮಿ ಪಿ.ತಿಪ್ಪೇಸ್ವಾಮಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಕಳೆದ ೪೦ ವರ್ಷಗಳಿಂದ ರಂಗಕಲೆ, ಸಂಗೀತ, ಸಾಹಿತ್ಯ, ಶಿಕ್ಷಣ ಕ್ಷೇತ್ರದ ಅಗ್ರಗಣ್ಯ ಸಾಧಕ ಹಾಗೂ ಬುಡಕಟ್ಟು ಆಚರಣೆ, ಸಂಪ್ರದಾಯಗಳಿಗೆ ಇಂದಿಗೂ ಜೀವ ತುಂಬುವ ಕೆಲಸದಲ್ಲಿ ನಿರತರಾದ ನಾಟಕ ಅಕಾಡೆಮಿ ಮಾಜಿ ಸದಸ್ಯ, ಹಿರಿಯ ರಂಗಕರ್ಮಿ ಪಿ.ತಿಪ್ಪೇಸ್ವಾಮಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಭಾಜನರಾಗಿದ್ದಾರೆ.
ಡಿಸಿ ದಿವ್ಯಾಪ್ರಭು ವರ್ಗಾವಣೆಗೆ ಪಿತೂರಿ ಆರೋಪ
ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರ ವರ್ಗಾವಣೆಗೆ ಜನಪ್ರತಿನಿಧಿಗಳು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿರುವ ರೈತ ಸಂಘಟನೆಗಳು ತೀವ್ರ ಅಸಮಾಧಾನ ಹೊರ ಹಾಕಿವೆ. ಸೋಮವಾರ ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿದರು. ರೈತ ಸಂಘಟನೆಯ ಮಹಿಳಾ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಇದ್ದದ್ದು ವಿಶೇಷವಾಗಿತ್ತು. ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ನಡೆಸಿ, ಹಾಗೊಂದು ವೇಳೆ ಡಿಸಿಯವರನ್ನು ವರ್ಗಾವಣೆ ಮಾಡಿದ್ದೇ ಆದಲ್ಲಿ ಜಿಲ್ಲೆಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ನಸುಕಿನಲ್ಲಿಯೇ ಚುರುಕು ಮುಟ್ಟಿಸಿದ ಲೋಕಾಯುಕ್ತ
ಜಿಲ್ಲೆಯ ಆಯಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳ ಮನೆ ಹಾಗೂ ಫಾರಂ ಹೌಸ್ ಮೇಲೆ ಸೋಮವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಚಿನ್ನಾಭರಣ, ನಗದು ಸೇರಿದಂತೆ ಕೆಲ ಕಾಗದ ಪತ್ರಗಳ ವಶಪಡಿಸಿಕೊಂಡಿದ್ದಾರೆ. ಅರಣ್ಯ ಇಲಾಖೆ ಹಿರಿಯೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸಿಎಫ್ ನಾಗೇಂದ್ರ ನಾಯ್ಕ್ ಮನೆ ಮೇಲೆ ಮುಂಜಾನೆ ಏಳು ಗಂಟೆಗೆ ದಾಳಿ ಮಾಡಿದ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದ ತಂಡ ಇಡೀ ಮನೆಯನ್ನು ಪೂರ್ಣ ಪ್ರಮಾಣದಲ್ಲಿ ತಲಾಶ್ ಮಾಡಿತು. ರಾತ್ರಿ ಏಳುವರೆ ವರೆಗೂ ದಾಳಿ ಮುಂದವರಿದಿತ್ತು. ನಾಗೇಂದ್ರ ನಾಯ್ಕರ ಚಂದ್ರಾ ಲೇ ಔಟ್ ಮನೆ ಹಾಗೂ ತವನಿಧಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಯಿತು.
  • < previous
  • 1
  • ...
  • 506
  • 507
  • 508
  • 509
  • 510
  • 511
  • 512
  • 513
  • 514
  • 515
  • next >
Top Stories
ದಸರಾ ಉದ್ಘಾಟನೆಗೆ ಬಾನುಗೆ ಅಧಿಕೃತ ಆಹ್ವಾನ
ಮಧ್ಯಮ ವರ್ಗಕ್ಕೆ ಜಿಎಸ್‌ಟಿ ಕಡಿತ ಬಂಪರ್‌ : ಸಣ್ಣ ಕಾರು, ಬೈಕ್‌ಗಳು, ವಿಮೆ, ಸಿಮೆಂಟ್‌ ಅಗ್ಗ
ರಾಜ್ಯದ 3 ಜಿಲ್ಲೇಲಿ ಹಾವುಕಡಿತ ಹೆಚ್ಚಳ : ಎಚ್ಚರಿಕೆ!
ಚಳಿಯಿಂದ ದರ್ಶನ್‌ಗೆ ಒಂದೂ ಬೆರಳು ಅಲುಗಾಡಿಸಲು ಆಗ್ತಿಲ್ಲ!
ಕಪ್‌ ತುಳಿತದ 3 ತಿಂಗಳಬಳಿಕ ವಿರಾಟ್‌ ಬೇಸರ!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved