ಜೀವನದಲ್ಲಿ ಹೊಂದಾಣಿಕೆಯ ಜೀವನ ಮುಖ್ಯ: ಸುತ್ತೂರು ಶ್ರೀಜೀವನದಲ್ಲಿ ಕೇವಲ ತಪ್ಪುಗಳನ್ನು ಗುರುತಿಸುತ್ತಾ ಹೋದರೆ ಅದು ಮನಸ್ತಾಪಕ್ಕೆ ಕಾರಣವಾಗುತ್ತದೆ. ಒಳ್ಳೆಯ ಅಂಶಗಳನ್ನು ಗುರುತಿಸುತ್ತಾ ಪ್ರೋತ್ಸಾಹಿಸಿದರೆ ಬದುಕು ಸ್ವರ್ಗದಂತಿರುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕಾದರೆ ಸಮಚಿತ್ತದಿಂದ ಇರಬೇಕು. ಪ್ರಕೃತಿಯಲ್ಲಿ ಹಾಗೂ ಎಲ್ಲರಲ್ಲೂ ಭಗವಂತನನ್ನು ಕಾಣಬೇಕು. ಜೀವನದಲ್ಲಿ ಅತಿ ಆಸೆಯೇ ದುಃಖಕ್ಕೆ ಕಾರಣವಾಗುತ್ತದೆ.