ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರವಾಸ: ಮೈಲಾರಿಯಲ್ಲಿ ತಿಂಡಿ, ಸ್ನೇಹಿತರ ಮನೆ, ಆಸ್ಪತ್ರೆಗೆ ಭೇಟಿಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್ ನಲ್ಲಿ ಸಿದ್ದರಾಮಯ್ಯ ಅವರು ದೋಸೆ ಸವಿದರು. ಮೈಸೂರಿಗೆ ಬಂದಾಗಲೆಲ್ಲ ಮೈಲಾರಿ ಹೋಟೆಲ್ ಗೆ ಭೇಟಿ ನೀಡಿ ಇಷ್ಟವಾದ ದೋಸೆ ತಿನ್ನುವ ಸಿದ್ದರಾಮಯ್ಯ ಅವರಿಗೆ ಶನಿವಾರ ಅವರ ಪುತ್ರ ಡಾ. ಯತೀಂದ್ರ, ಶಾಸಕ ಎ.ಆರ್. ಕೃಷ್ಣಮೂರ್ತಿ ಸಾಥ್ ನೀಡಿದರು.