ರೈತರನ್ನು 3ನೇ ದರ್ಜೆಯ ಜನರೆಂದು ಪರಿಗಣಿಸಲಾಗುತ್ತಿರುವುದು ನೋವಿನ ಸಂಗತಿ: ಎಚ್ಡಿಕೆದೇಶ ತಾಂತ್ರಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸಿದ್ದು, ವಿಶ್ವದ ಇತರೆ ರಾಷ್ಟ್ರಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದೆ. ಆದರೆ ಸಮಾಜದಲ್ಲಿ ಜನರ ನಡುವೆ ಬಾಂಧವ್ಯದ ಕೊರತೆ ಕಾಡುತ್ತಿರುವುದು ನೋವಿನ ಸಂಗತಿ. ಆಡಳಿತ ವ್ಯವಸ್ಥೆಯಲ್ಲಿನ ರೈತರ ಕಾರ್ಯಕ್ರಮಗಳ ಜಾರಿ ವೈಫಲ್ಯದಿಂದ ಚಾಮರಾಜನಗರದ ಮೂಲಕ ಶುರುವಾದ ಮೈಕ್ರೋ ಪೈನಾನ್ಸ್ ಕಿರುಕುಳ ಪ್ರಕರಣಗಳು ರಾಜ್ಯದ ವಿವಿಧೆಡೆ ದಿನನಿತ್ಯ ಕಂಡುಬರುತ್ತಿದ್ದು, ಸಾಮಾನ್ಯ ಜನರು ನೋವಿನಲ್ಲಿದ್ದಾರೆ.