ಮರಿತಿಬ್ಬೇಗೌಡ ಪರವಾಗಿ ವಿವಿಧೆಡೆ ಎಂ.ಕೆ. ಸೋಮಶೇಖರ್ ಮತಯಾಚನೆಜೂ.3 ರಂದು ಕರ್ನಾಟಕ ವಿಧಾನಪರಿಷತ್ತಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದಿಂದ ಮರಿತಿಬ್ಬೇಗೌಡರು ಸ್ಪರ್ಧಿಸಿದ್ದಾರೆ. ಈಗಾಗಲೇ 4 ಬಾರಿ ವಿಧಾನಪರಿಷತ್ತಿಗೆ ಆಯ್ಕೆಯಾಗಿ ತಮ್ಮ ಸಾಮರ್ಥ್ಯ, ಬದ್ಧತೆಯನ್ನೂ ಪ್ರದರ್ಶಿಸಿ ಶಿಕ್ಷಕರ ಪರವಾದ ಒಂದು ಗಟ್ಟಿ ದನಿಯಾಗಿದ್ದಾರೆ. ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ, ಅವುಗಳನ್ನು ಪರಿಹರಿಸುವಲ್ಲಿ ಯಾವ ರಾಜಿಗೂ ಸಿದ್ಧರಾಗದೆ ಹೋರಾಡುತ್ತಾ ಬಂದಿದ್ದಾರೆ.