ಅರ್ಧದಷ್ಟು ಪಠ್ಯಪುಸ್ತಕ ಮಾತ್ರ ಪೂರೈಕೆಬೇಸಿಗೆಯ ರಜೆ ಮುಗಿದು ಶಾಲೆಗಳು ಇದೀಗ ತಾನೆ ಆರಂಭಗೊಂಡಿವೆ. ಆದರೆ, ತಾಲೂಕಿನಲ್ಲಿ ಅರ್ಧದಷ್ಟು ಮಾತ್ರ ಪಠ್ಯಪುಸ್ತಕಗಳು ಪೂರೈಕೆ ಆಗಿವೆ. ಆದರೆ, ಶಾಲಾ ಆರಂಭೋತ್ಸವದ ದಿನದಂದೇ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಬೇಕೆಂದು ಇಲಾಖೆಯಿಂದ ನಿರ್ದೇಶನವಿದೆ. ಹೀಗಾಗಿ ಬಂದಿರುವ ಅರ್ಧ ಪಠ್ಯಪುಸ್ತಕಗಳನ್ನು ಅರ್ಧ ಮಕ್ಕಳಿಗೆ ಹಂಚಿ ಇನ್ನರ್ಧ ಮಕ್ಕಳಿಗೆ ಹೇಗೆ ಬಿಡುವುದು ಎಂಬ ಗೊಂದಲ ಶಿಕ್ಷಕ ವರ್ಗದಲ್ಲಿ ಮನೆ ಮಾಡಿದೆ.