ವಿಪ ಚುನಾವಣೆಯಲ್ಲಿ ಉಪ್ಪಾರರಿಗೆ ಆದ್ಯತೆ ನೀಡಬೇಕುಹಿಂದುಳಿದ ಶೋಷಿತ ಸಮುದಾಗಳಲ್ಲಿ 2ನೇ ಅತಿ ದೊಡ್ಡ ಸಮಾಜ, ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜವು 224 ವಿಧಾನಸಭಾ ಕ್ಷೇತ್ರದ ಪೈಕಿ 35 ಕ್ಷೇತ್ರದ ನಿರ್ಣಾಯಕವಾಗಿದೆ. ಇಂತಹ ಸಮಾಜಕ್ಕೆ ವಿಧಾನ ಪರಿಷತ್‌ಗೆ ಅವಕಾಶ ನೀಡುವಂತೆ ದೂಡಾ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಎ.ವೈ.ಪ್ರಕಾಶ ಒತ್ತಾಯಿಸಿದ್ದಾರೆ.