ತಹಸೀಲ್ದಾರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಬದ್ಧ-ರಾಯರಡ್ಡಿತಹಸೀಲ್ದಾರ ಕಚೇರಿ ನಿರ್ಮಾಣ ಮಾಡಬೇಕು ಎಂದು ನಿಗದಿಪಡಿಸಿದ ಭೂ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕುಕನೂರಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಸರ್ಕಾರಿ ಜಾಗವಿದೆ. ಸರ್ಕಾರಿ ಜಾಗ ಇರದಿದ್ದರೆ ಮಾತ್ರ ಖಾಸಗಿ ಮಾಲೀಕತ್ವದ ಜಮೀನು ಭೂ ಸ್ವಾಧೀನ ಪಡಿಸಿಕೊಳ್ಳಬೇಕು. ಇಲ್ಲಿನ ಸರ್ಕಾರಿ ಜಾಗದಲ್ಲಿ ಕೋರ್ಟ್ ಸಂಕೀರ್ಣ, ಕ್ರೀಡಾಂಗಣ, ಸಮುದಾಯ ಭವನ, ತಹಸೀಲ್ದಾರ ಕಚೇರಿ ನಿರ್ಮಾಣಕ್ಕೆ ಜಿಲ್ಲಾಡಳಿತ ಸೂಚಿಸಿದರೆ, ಅಲ್ಲಿಯೇ ನಿರ್ಮಾಣ ಮಾಡಲಾಗುವುದು.