ಶತಮಾನ ಕಂಡ ತುಂಗಾ ಸೇತುವೆಗೆ ಆಪತ್ತುಸೇತುವೆ ಎರಡೂ ಬದಿಯಲ್ಲಿ ಗಿಡಗಳು ಬೃಹದಾಕಾರವಾಗಿ ಬೆಳೆದಿರುವುದರಿಂದ ಸೇತುವೆ ಪಕ್ಕದ ಸ್ಪ್ಯಾಬ್‌ಗಳು ಕುಸಿಯುವ ಹಂತ ತಲುಪಿವೆ. ಆದರೂ ಅಧಿಕಾರಿಗಳು ಗಮನಹರಿಸಿಲ್ಲ. ಸದ್ಯ ಈ ಸೇತುವೆಯಲ್ಲಿ ಭಾರಿ ವಾಹನಗಳ ಓಡಾಟವನ್ನು ನಿಲ್ಲಿಸಲಾಗಿದೆ. ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಸೇತುವೆ ಬದಿಯಲ್ಲಿ ಬೆಳೆದಿರುವ ಅರಳಿ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕದೆ ಇದ್ದೆ, ಮುಂದೆ ದಿನ ದಿನಕ್ಕೆ ಮರ ಬೆಳೆಯತ್ತಲೇ ಹೋಗಿ ಅದರ ಬೇರುಗಳು ಆಳವಾಗಿ ನೆಲೆಯೂರುವುದರಿಂದ ಸೇತುವೆ ಬಿರುಕು ಬಿಡುವ ಸಾಧ್ಯತೆಗಳು ಹೆಚ್ಚಾಗಿದೆ.