ಗದಗ- ಬೆಟಗೇರಿಯಲ್ಲಿ ಜಾಗೃತವಾಗಿದೆ ಮೂರನೇ ಕಣ್ಣುಗದಗ- ಬೆಟಗೇರಿ ಅವಳಿ ನಗರದಲ್ಲಿ ಸಂಚಾರ ನಿಯಮ ಪಾಲನೆ, ಸುಗಮ ಸಂಚಾರ ವ್ಯವಸ್ಥೆ ಜಾರಿಗಾಗಿ ರೂಪಿಸಲಾಗಿರುವ ಥರ್ಡ್ ಐ ಯೋಜನೆ ಪರಿಣಾಮಕಾರಿ ಕಾರ್ಯರೂಪಕ್ಕೆ ಬಂದಿದ್ದು, ಸಂಚಾರ ನಿಯಮದ ಬಗ್ಗೆ ಅತ್ಯಂತ ನಿರ್ಲಕ್ಷ್ಯದ ಮಾತುಗಳನ್ನು ಆಡುತ್ತಿದ್ದ ಜನರೆಲ್ಲಾ ಈಗ ಸ್ವಯಂ ಪ್ರೇರಿತವಾಗಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸುವುದು ಸೇರಿ ಹೊಸತನಕ್ಕೆ ಒಗ್ಗಿ ಕೊಳ್ಳುತ್ತಿದ್ದಾರೆ.