ನೋಡುಗರ ಮನಸೆಳೆದ ಶ್ವಾನಗಳ ಪ್ರದರ್ಶನಹಾಸನ ಪೊಲೀಸ್ ಇಲಾಖೆಯ ತರಬೇತಿ ಪಡೆದ ಲಾಸಿ ನಾಯಿ ಪ್ರಥಮ ಪ್ರದರ್ಶನ ನೀಡಿತು. ಅದರ ಚುರುಕುತನ, ಆಜ್ಞೆ ಪಾಲನೆ ಹಾಗೂ ನೈಪುಣ್ಯ ಮೆಚ್ಚುಗೆಗೆ ಪಾತ್ರವಾಯಿತು. ಇದರ ಬಳಿಕ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಂದ ಸುಮಾರು ೮೦ಕ್ಕೂ ಹೆಚ್ಚು ವಿವಿಧ ತಳಿಯ ನಾಯಿಗಳು ಲ್ಯಾಬ್ರಡಾರ್, ಜರ್ಮನ್ ಶೆಪರ್ಡ್, ಡೋಬರ್ಮಾನ್, ಪೊಮೆರೇನಿಯನ್, ರಾಟ್‌ವೈಲರ್, ಹಸ್ಕಿ ಹಾಗೂ ಭಾರತೀಯ ತಳಿಯ ನಾಯಿಗಳು ತಮ್ಮ ಮಾಲೀಕರ ಮಾರ್ಗದರ್ಶನದಲ್ಲಿ ಪ್ರದರ್ಶನ ನೀಡಿದವು. ನಾಯಿಗಳ ಆರೈಕೆ, ಶಿಸ್ತು, ನಡವಳಿಕೆ, ಮೈಕಟ್ಟು ಮತ್ತು ಪ್ರದರ್ಶನ ಶೈಲಿಯ ಆಧಾರದ ಮೇಲೆ ನ್ಯಾಯಾಧೀಶರು ಮೌಲ್ಯಮಾಪನ ನಡೆಸಿದರು.