ಮಿತಿ ಮೀರಿದ ಮಾಲಿನ್ಯ: ಕಡೇಚೂರಿಗೆ ಕೇಡುಗಾಲ..!ಮಂಗಳವಾರ (ಆ.5) ತಡರಾತ್ರಿ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಹವಾಮಾನ ಅತ್ಯಂತ ಹೀನಾಯವಾಗಿತ್ತು. ಇಲ್ಲಿನ ಕೆಮಿಕಲ್ ಕಂಪನಿಗಳ ಕಳ್ಳಾಟದ ಮುಂದುವರೆದ ಭಾಗವಾಗಿ, ವಾಯು ಗುಣಮಟ್ಟ ಸೂಚ್ಯಂಕ 121 ಕ್ಕೇರುವ ಮೂಲಕ, ಇಡೀ ಪ್ರದೇಶದಲ್ಲಿ "ಅನಾರೋಗ್ಯಕರ " ವಾತಾವರಣದ ಎಚ್ಚರಿಕೆಯ ಗಂಟೆ ಬಾರಿಸಿದಂತಿತ್ತು.