ಅಗಲಿದ ಪತ್ರಕರ್ತರಿಗೆ ಶ್ರದ್ಧಾಂಜಲಿಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರಾದ ಎಸ್.ಕೆ.ಶ್ಯಾಮಸುಂದರ್, ಎಸ್.ಎನ್.ಅಶೋಕ ಕುಮಾರ್ ಮತ್ತು ಉಡುಪಿ ಸಂದೀಪ್ ಕುಮಾರ್ ಅವರಿಗೆ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಜಾವಾಣಿ ನಿವೃತ್ತ ಸಂಪಾದಕರಾದ ಪದ್ಮರಾಜ ದಂಡವತಿ, ಹಿರಿಯ ಪತ್ರಕರ್ತರುಗಳಾದ ಎಸ್.ಕೆ.ಶೇಷಚಂದ್ರಿಕಾ, ಅನಂತ ಚಿನಿವಾರ, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಖಜಾಂಚಿ ವಾಸುದೇವಹೊಳ್ಳ, ಐಎಫ್ಡಬ್ಲ್ಯೂಜೆ ಅಧ್ಯಕ್ಷರಾದ ಬಿ.ವಿ. ಮಲ್ಲಿಕಾರ್ಜುನಯ್ಯ ಇದ್ದರು.