ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ಶ್ರವಣಬೆಳಗೊಳದ ಚಾರುಶ್ರೀದೇವರ ಪ್ರಸಾದ, ಶ್ರೀಮಠದ ಫಲ ತಾಂಬೂಲ, ಪುಷ್ಪಮಾಲೆಯೊಂದಿಗೆ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ತೆರಳಿದ ಚಾರುಶ್ರೀಗಳು, ಎಚ್‌ಡಿಡಿ ಅವರ ಹಣೆ ಹಾಗೂ ತಲೆಗೆ ತಾವೇ ಗಂಧೋದಕ ಹಚ್ಚಿ ಆದಷ್ಟು ಬೇಗ ಮೊದಲಿನಂತಾಗಿ ಎಂದು ಹರಸಿದರು. ದೇವೇಗೌಡರಿಗೆ ದೇವರ ಪ್ರಸಾದ ನೀಡಿ, ಅವರ ತಲೆಯ ಮೇಲೆ ಹೂ ಇಟ್ಟು, ನಿಮ್ಮ ಆಯಸ್ಸು ಮತ್ತಷ್ಟು ವೃದ್ಧಿಯಾಗಲಿ, ನಿಮ್ಮಿಂದ ಜಿಲ್ಲೆ, ನಾಡು, ದೇಶಕ್ಕೆ ಇನ್ನಷ್ಟು ಅಮೂಲ್ಯ ಸೇವೆ ದೊರಕುವಂತಾಗಲಿ, ಆ ಶಕ್ತಿಯನ್ನು ಭಗವಾನ್ ಬಾಹುಬಲಿ ಸ್ವಾಮಿ ಕರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು. ಈ ವೇಳೆ ಕೈ ಮುಗಿದು ಗುರುವಂದನೆ ಸಲ್ಲಿಸಿದ ದೇವೇಗೌಡರು, ಜಿನೈಕ್ಯರಾದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಕೊಡುಗೆ, ಬಾಂಧವ್ಯವನ್ನು ಸ್ಮರಿಸಿದರು.