ಪೆರಿಕ್ಯುಲೇರಿಯಾ ಫಂಗಸ್‌ನಿಂದ ಶುಂಠಿ ಬೆಳೆಗಾರರು ಕಂಗಾಲುಸುಮಾರು ಸಾವಿರ ಎಕರೆ ಪ್ರದೇಶದಲ್ಲಿ ರೈತರು ಶುಂಠಿ ಕೃಷಿ ಮಾಡಿದ್ದಾರೆ. ದಶಕಗಳ ಹಿಂದೆ ಮೈಸೂರು, ಕೊಡಗು ಮತ್ತು ಹಾಸನದ ಕೆಲ ತಾಲೂಕುಗಳಿಗೆ ಸೀಮಿತವಾಗಿದ್ದ ಶುಂಠಿಬೆಳೆ ಪ್ರಸ್ತುತ ರಾಜ್ಯದ ಇತರೆ ಜಿಲ್ಲೆಗಳಿಗೂ ವ್ಯಾಪಿಸಿದೆ. ಈಗ ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಉತ್ತರಕನ್ನಡ ಮತ್ತು ಬೀದರ್ ಜಿಲ್ಲೆಗಳಲ್ಲೂ ಶುಂಠಿ ಕೃಷಿ ವಿಸ್ತರಿಸಿದೆ. ಕಳೆದ ವರ್ಷ ಆರು ತಿಂಗಳ ವಯಸ್ಸಿನ ಶುಂಠಿ ಬೆಳೆಗೆ ರೋಗ ಬಾಧಿಸಿತ್ತು. ಆ ವೇಳೆಗೆ ಗೆಡ್ಡೆಗಳು ಬಲಿತಿದ್ದವು. ಗಿಡಗಳು ಮಾತ್ರ ಒಣಗಿದವು. ಹಾಗಾಗಿ ಗೆಡ್ಡೆಗಳಿಗೆ ಅಷ್ಟಾಗಿ ತೊಂದರೆಯಾಗಲಿಲ್ಲ. ಈ ಬಾರಿ ಎರಡು ತಿಂಗಳ ಬೆಳೆಗೆ ರೋಗ ಬಾಧಿಸುತ್ತಿದೆ. ಹೀಗಾಗಿ ಗಿಡಗಳು ಒಣಗುತ್ತವೆ, ಗೆಡ್ಡೆ ಕೊಳೆಯುತ್ತಿದೆ. ಚಿಕಿತ್ಸೆ ನೀಡದಿದ್ದರೆ, ರೋಗ ತಗುಲಿದ ಎರಡು-ಮೂರು ವಾರಗಳಲ್ಲಿ ಬೆಳೆ ಸಂಪೂರ್ಣ ನಾಶವಾಗುತ್ತದೆ.