ಕೆಲಸಕ್ಕೆ ತೆರಳಲು ಪರದಾಡಿದ ಗಾರ್ಮೆಂಟ್ಸ್ ಕಾರ್ಮಿಕರುಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಸಾರಿಗೆ ನೌಕರರು ವೇತನ ಹಿಂಬಾಕಿ, ವೇತನ ಹೆಚ್ಚಳಕ್ಕೆ ಒತ್ತಾಯಿಸಿ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಘೋಷಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರದಿಂದ ವಿದ್ಯಾರ್ಥಿಗಳು, ಗ್ರಾರ್ಮೆಂಟ್ಸ್ ಹಾಗೂ ಇತರೆ ಕಾರ್ಮಿಕರು, ನೌಕರರು, ರೋಗಿಗಳು, ವಯೋವೃದ್ಧರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದರು. ಕೆಎಸ್ಸಾರ್ಟಿಸಿ ನೌಕರರ ಬೇಡಿಕೆಗಳು ಈಡೇರದ ಕಾರಣ, ಮುಷ್ಕರದ ಹಾದಿ ಹಿಡಿದಿದ್ದಾರೆ. ಪಟ್ಟಣದಿಂದ ಹಾಸನಕ್ಕೆ ಸಾರಿಗೆ ದರ ೪೩ ರು. ಇದ್ದು, ಖಾಸಗಿ ವಾಹನಗಳಲ್ಲಿ ೬೦ ರು. ಮತ್ತು ಬೆಂಗಳೂರಿಗೆ ೨೨೫ ರು. ಇದ್ದು ಖಾಸಗಿ ವಾಹನದಲ್ಲಿ ೪೦೦ ರು. ಪಡೆಯುತ್ತಿದ್ದರು.