ದಾವಣಗೆರೆಯಲ್ಲಿ ದಿಢೀರ್ ಮಳೆ: ವ್ಯಾಪಾರಿಗಳು ಕಂಗಾಲುದೀಪಾವಳಿ ಹಬ್ಬದ ಹೂವು, ಹಣ್ಣು ಹಂಪಲು, ಬಾಳೆಕಂಬ, ಮಾವಿನ ತೋರಣ, ಕಾಚಿ ಕಡ್ಡಿ, ಬ್ರಹ್ಮದಂಡಿಯಂತಹ ಪೂಜಾ ಸಾಮಗ್ರಿ ಮಾರಾಟಕ್ಕೆ ತಂದಿದ್ದ ಸಣ್ಣಪುಟ್ಟ ಬಡ ವ್ಯಾಪಾರಸ್ಥರು, ರೈತರು, ರೈತಾಪಿ ಕುಟುಂಬ, ಕೂಲಿ ಕಾರ್ಮಿಕರು, ಕುಟುಂಬ ಸಮೇತ ಬಂದಿದ್ದ ಮಕ್ಕಳು, ಹಬ್ಬಕ್ಕೆ ಖರೀದಿಗೆ ಹೋಗಿದ್ದ ಜನರು ಭಾನುವಾರ ಸಂಜೆ 7ರಿಂದ ದಿಢೀರನೇ ಸುರಿದ ಭಾರೀ ಮಳೆಯಿಂದಾಗಿ ಕತ್ತಲಿನಲ್ಲೇ ಪರದಾಡಬೇಕಾಯಿತು.