25 ವರ್ಷಗಳ ಬಳಿಕ ಒಂದಾದ ಗುರು-ಶಿಷ್ಯರುಕನ್ನಡಪ್ರಭ ವಾರ್ತೆ ಕಾಗವಾಡ: ಕಾಗವಾಡ ತಾಲೂಕಿನ ಜುಗೂಳ ಕೆಎಸ್ಎಸ್ ಪ್ರೌಢಶಾಲೆಯಲ್ಲಿ 1997 ಹಾಗೂ 98 ರಲ್ಲಿ ಕಲಿತ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಮಾರು 25 ವರ್ಷಗಳ ಬಳಿಕ ಗುರು-ಶಿಷ್ಯರು ಹಾಗೂ ಗೆಳೆಯ, ಗೆಳತಿಯರು ಒಂದು ಕಡೆ ಸೇರಿ ಹಳೆಯ ದಿನಗಳನ್ನು ಮೆಲಕು ಹಾಕಿದರು. ಅಲ್ಲದೇ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮಿಸಿದರು.