ಕರಾಟೆ ಚಾಂಪಿಯನ್ ಭಾಗ್ಯಶ್ರೀಗೆ ಬೇಕಿದೆ ನೆರವಿನ ಹಸ್ತಗ್ರಾಮೀಣ ಪ್ರದೇಶದ ಬಡ ಕರಾಟೆ ಪ್ರತಿಭೆಯಾಗಿರುವ ಭಾಗ್ಯಶ್ರೀ ಗುರಪ್ಪ ಬರ್ಮಾ ಇವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಶಾಲೆಯಲ್ಲಿ ಶಿಕ್ಷಕರಿಂದ ತರಬೇತಿ ಪಡೆದುಕೊಂಡು ಇಂದು ವಿಶ್ವ ಮಟ್ಟದಲ್ಲಿ ಕರಾಟೆ ಚಾಂಪಿಯನ್ಶಿಪ್ಗಳಲ್ಲಿ ಭಾಗಿಯಾಗಿ ಭಾರತದ ಹೆಸರು ಬೆಳಗುತ್ತಿದ್ದಾರೆ. ಕರಾಟೆಯಲ್ಲಿ ಪಳಗಿರುವ ಈ ಗೃಹಿಣಿಗೆ ದೇಶ ವಿದೇಶ ಸುತ್ತಲು ಹಣದ ಕೊರತೆ. ಹೀಗಾಗಿ ಕರಾಟೆಯ ಈ ಪಟುವಿಗೆ ನೆರವಿನ ಹಸ್ತಗಳು ಇಂದು ಅಗತ್ಯವಾಗಿವೆ.