ಪಾತ್ರಗಳಿಗೆ ಜೀವ, ಭಾವ ತುಂಬುತ್ತಿದ್ದ ಕಲಾವಿದ ವಿಷ್ಣು ಭಟ್ ಮೂರೂರುಪ್ರಸಿದ್ಧ ಯಕ್ಷಗಾನ ಕಲಾವಿದ ವಿಷ್ಣು ಭಟ್ ಮೂರೂರು ನಿಧನರಾಗಿದ್ದು, ಯಕ್ಷ ಪರಂಪರೆಯ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ.ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸ್ತ್ರೀಪಾತ್ರದ ಮೂಲದ ಯಕ್ಷಪ್ರಿಯರ ಮನಗೆದ್ದ ವಿಷ್ಣು ಭಟ್ ಮೂರೂರು ಯಕ್ಷಗಾನದ ಹಲವು ಪಾತ್ರಗಳಿಗೆ ಜೀವ ತುಂಬುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.ಎಸ್ಎಸ್ಎಲ್ಸಿ ಪೂರೈಸುತ್ತಿದ್ದಂತೆ ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟ ಅವರು ಮೂರೂರು ರಾಮ ಹೆಗಡೆ, ಕರ್ಕಿಯ ಪಿ.ವಿ. ಹಾಸ್ಯಗಾರ ಅವರಿಂದ ಆರಂಭಿಕ ತರಬೇತಿ ಪಡೆದರು. ಸ್ತ್ರೀಯ ಒನಪು ಒಯ್ಯಾರ, ಭಾವಪೂರ್ಣ ಮಾತು, ಲಾಲಿತ್ಯಪೂರ್ಣ ಕುಣಿತಗಳಿಂದ ಹೆಸರಾದರು.