ಶ್ರಮಿಕರಿಂದ ಸಮಾಜ ಆರೋಗ್ಯ ಸಾಧ್ಯ: ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ಇಡೀ ಮಾನವ ಜಗತ್ತು ನಡೆಯುತ್ತಿರುವುದು ಶ್ರಮಿಕರಿಂದ ಹಾಗೂ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದರಿಂದ ಸಮಾಜ ಆರೋಗ್ಯವಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು. ಹಾಸನದಲ್ಲಿ ಸಿಐಟಿಯು ಬುಧವಾರ ಬೆಳಿಗ್ಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನವಾದ ‘ಮೇ ದಿನ’ ಆಚರಣೆಯಲ್ಲಿ ಉದ್ಘಾಟನೆ ಭಾಷಣ ಮಾಡಿದರು.