ಫೈಯರ್, ರಿಪೀಟ್ ಅಂದ್ರೇನು, ವೈಯಕ್ತಿಕ ವಿಚಾರ ಬೇಡನಿಮ್ಮ ಕಲ್ಲೇಶ್ವರ ಮಿಲ್‌ನಲ್ಲಿ ಫೈಯರ್, ರಿಪೀಟ್ ಹೆಸರಿನಲ್ಲಿ ಮಾಡ್ತಿರೋದು ನೀವೇ ಹೊರತು ನಾವಲ್ಲ. ಪುಣ್ಯಾತ್ಮ ನಿನ್ನ ಹೆಂಡತಿ ಓದಿರುವುದು ದಂತ ವೈದ್ಯಕೀಯ. ವೈಯಕ್ತಿಕ ವಿಚಾರಕ್ಕೆ ಬರಬೇಡ. ಚುನಾವಣೆಗೆ ನಿನ್ನ ಕೆಲಸ ನೀನು ಮಾಡು, ನನ್ನ ಕೆಲಸ ನಾನು ಮಾಡುತ್ತೇನೆ. ಒಬ್ಬ ಮನುಷ್ಯನನ್ನು ಕೀಳಾಗಿ ನೋಡುವುದು ಸರಿಯಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಮ್ಮ ಬದ್ಧ ವೈರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರಿಗೆ ದಾವಣಗೆರೆಯಲ್ಲಿ ಸಲಹೆ ನೀಡಿದ್ದಾರೆ.