ಬತ್ತಿದ ಬಜೆ ಅಣೆಕಟ್ಟೆ: ಉಡುಪಿಗೆ ಜಲಕ್ಷಾಮ ಭೀತಿಈ ತಿಂಗಳ ಆರಂಭದಲ್ಲಿ ಬಜೆ ಅಣೆಕಟ್ಟೆಯಲ್ಲಿ 6 ಮೀಟರ್ ನೀರಿತ್ತು. ಎರಡು ವಾರಗಳ ಹಿಂದೆ ಇದು 5 ಮೀಟರ್‌ಗೆ ಇಳಿದಿದ್ದು, ಕಳೆದ ಸೋಮವಾರ ನೀರಿನ ಮಟ್ಟ 4 ಮೀಟರ್ ಆಗಿತ್ತು. ಈ ಸೋಮವಾರ ನೀರಿನ ಮಟ್ಟ ಕೇವಲ 3.50 ಮೀಟರ್ ಗೆ ಇಳಿದಿದೆ. ಮುಂದಿನ 2 ವಾರಗಳಿಗಷ್ಟೇ ಈ ನೀರು ಸಾಕಾಗಬಹುದು ಎಂದು ನಗರಸಭೆ ಅಧಿಕಾರಿಗಳು ಅಂದಾಜಿಸಿದ್ದಾರೆ.