ಸಾಸಲುವಿನಲ್ಲಿ ಸಾಗದ ಜೋಡಿ ರಥ: ಕಳೆಗುಂದಿದ ಜಾತ್ರೆವರ್ಷಕ್ಕೆ ಲಕ್ಷಾಂತರ ರು. ವರಮಾನ ಮುಜರಾಯಿ ಇಲಾಖೆಗೆ ದೇಗುಲದಿಂದ ಬರುತ್ತಿದೆ. ಭಕ್ತರ ಹತ್ತಾರು ವರ್ಷಗಳ ಬೇಡಿಕೆ, ಒತ್ತಾಸೆಯಿಂದ ಎರಡು ವರ್ಷಗಳ ಹಿಂದೆರಥ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಕರೆಯಲಾಗಿತ್ತು. ಎರಡು ವರ್ಷಗಳ ಹಿಂದೆ ರಥ ನಿರ್ಮಿಸಲು ಶ್ರೀರಂಗಪಟ್ಟಣ ತಾಲೂಕಿನ ಶಿಲ್ಪಿ ಮುಂದಾಗಿದ್ದು ರಥ ನಿರ್ಮಾಣ ಕುಂಟುತ್ತ ಸಾಗಿದೆ. ಪರಿಣಾಮ ಕಳೆದ ವರ್ಷ ಹಳೆಯ ರಥಗಳನ್ನು ಹಗ್ಗಕಟ್ಟಿ ಎಳೆಯದೆ ರಥಗಳನ್ನು ನೂಕುವ ಮೂಲಕ ರಥೋತ್ಸವವನ್ನು ಆಚರಿಸಲಾಯಿತು.