ಬುದ್ಧಿಜೀವಿಗಳು ಕಾಂಗ್ರೆಸ್‌ನ ಭಟ್ಟಂಗಿಗಳು: ಎಚ್.ಆರ್.ಅರವಿಂದ್ಬಿಜೆಪಿ ಮತ್ತು ಹಿಂದೂ ಧರ್ಮವನ್ನು ಟೀಕಿಸುವುದೇ ಅವರ ಮುಖ್ಯ ಗುರಿ. ಜನರು, ರೈತ ಪರವಾದ ಕಾಳಜಿ, ಅಭಿವೃದ್ಧಿಯ ಯಾವೊಂದು ಚಿಂತನೆಗಳೂ ಅವರಲ್ಲಿ ಇಲ್ಲ. ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಬುದ್ದಿಜೀವಿಗಳು ಅಂಬೇಡ್ಕರ್ ಅವರನ್ನು ಸೋಲಿಸಿದ, ಅವರ ಅಂತ್ಯಕ್ರಿಯೆ, ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡದ ಕಾಂಗ್ರೆಸ್ ಪರ ವಕಾಲತ್ತು ವಹಿಸುತ್ತಿದ್ದಾರೆ. ಇವರಿಗೆ ಸ್ವಲ್ಪವೂ ನಾಚಿಕೆಯೂ ಇಲ್ಲ, ನೈತಿಕತೆಯೂ ಇಲ್ಲ.