ಕರ್ನಾಟಕಕ್ಕೆ ಕಾಸರಗೋಡು ಸೇರ್ಪಡೆ, ಇನ್ನೂ ಈಡೇರದ ಕನಸು: ಡಾ.ಮಹೇಶ್ ಜೋಶಿಕರ್ನಾಟಕದಲ್ಲಿ ಸ್ವಚ್ಛ, ಶುದ್ಧ ಕನ್ನಡ ಮಾತನಾಡುವ ಪ್ರದೇಶ ಇರುವುದು ಕರಾವಳಿಯಲ್ಲಿ. ಅದು ಕೂಡ ‘ಕನ್ನಡ’ ಎಂಬ ಶಬ್ದದ ಊರಿನ ಹೆಸರನ್ನು ಬೆಸೆದುಕೊಂಡಿರುವ ದಕ್ಷಿಣ ಹಾಗೂ ಉತ್ತರ ಕನ್ನಡ ಜಿಲ್ಲೆಗಳು. ಇಲ್ಲಿ ಕನ್ನಡ ಸೊರಗಿ, ಕೊರಗಿ ಹೋಗಿಲ್ಲ. ಇಲ್ಲಿನ ಜನತೆ ನುಡಿದಂತೆ ನಡೆದುಕೊಳ್ಳುತ್ತಾರೆ ಎಂದು ಸಮ್ಮೇಳನ ಉದ್ಘಾಟನಾ ಭಾಷಣದಲ್ಲಿ ಡಾ.ಮಹೇಶ್ ಜೋಶಿ ಪ್ರಶಂಸಿಸಿದರು.