ಹಿಂದುಗಳು ಸಂಘಟಿತರಾಗಿ ದೇಶ ಬಲಿಷ್ಠಗೊಳಿಸಿ: ಗುರುಪ್ರಸಾದ ಸ್ವಾಮೀಜಿಗೋಕಾಕ ನಗರದ ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಿಂದು ಜಾಗರಣ ವೇದಿಕೆಯವರು ಹಮ್ಮಿಕೊಂಡ ಬೃಹತ್ ಹಲಿಗೆ ಹಬ್ಬದ ಸಮಾರಂಭದಲ್ಲಿ ಹಿಂದು ಜಾಗರಣ ವೇದಿಕೆ ಮುಖ್ಯ ವಕ್ತಾರ ಕ್ರಾಂತಿಯೋಗಿ ಶ್ರೀ ಗುರುಪ್ರಸಾದ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶಿಷ್ಠ ಸ್ಥಾನವಿದೆ. ಹಬ್ಬ ಹರಿದಿನಗಳನ್ನು ಹೆಚ್ಚೆಚ್ಚು ಆಚರಣೆ ಮಾಡುವ ಮೂಲಕ ಹಿಂದು ಬಾಂಧವರು ಸಂಘಟಿತರಾಗಿ ದೇಶವನ್ನು ಬಲಿಷ್ಠಗೊಳಿಸುವಂತೆ ಕರೆ ನೀಡಿದರು.