ಕಾನೂನು ಕ್ಷೇತ್ರದಲ್ಲಿ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ:ಪ್ರೊ.ಎಸ್. ಸೂರ್ಯಪ್ರಕಾಶ್ವಕೀಲರು ನ್ಯಾಯಾಲಯದಲ್ಲಿ ಸಂಬಂಧಿತ ವಿಷಯವನ್ನು ಸರಿಯಾದ ರೀತಿಯಲ್ಲಿ ಮಂಡಿಸದೇ ಹೋದರೆ ವಕೀಲ ವೃತ್ತಿಯ ಉದ್ದೇಶ ಈಡೇರಿಸುವುದಿಲ್ಲ. ವಕೀಲರು ನ್ಯಾಯಾಧೀಶರಿಗೆ ಅರ್ಥವಾಗುವ ರೀತಿಯಲ್ಲಿ ವಾದ ಮಂಡಿಸದಿದ್ದರೆ ಯಶಸ್ವಿ ವಕೀಲರಾಗಲು ಸಾಧ್ಯವಿಲ್ಲ. ಹೀಗಾಗಿ, ವಕೀಲರಿಗೆ ಭಾಷಾ ಶುದ್ಧತೆ, ವಿಷಯ ಸ್ಪಷ್ಟತೆ, ವಾದವನ್ನು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಮಂಡಿಸುವ ಕೌಶಲ್ಯ ಬಹಳ ಮುಖ್ಯ