10 ದಿನದೊಳಗೆ ವೇತನ ನೀಡದಿದ್ದರೆ ಸಾಮೂಹಿಕ ರಜೆ: 108 ಆಂಬ್ಯುಲೆನ್ಸ್ ಸಿಬ್ಬಂದಿಆರೋಗ್ಯ ಕವಚ-108 ಆಂಬ್ಯುಲೆನ್ಸ್ ಸಿಬ್ಬಂದಿಗೆ ಕಳೆದ 5 ವರ್ಷಗಳಿಂದಲೂ 3-4 ತಿಂಗಳಿಗೊಮ್ಮೆ ವೇತನ ನೀಡುತ್ತಿದ್ದು, ಕಳೆದ ಡಿಸೆಂಬರ್ 2023ರಿಂದ ಈವರೆಗೆ ವೇತನವೇ ನೀಡಿಲ್ಲ. ಇದರಿಂದ ಸಿಬ್ಬಂದಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಸುವರ್ಣ ಕರ್ನಾಟಕ ಆರೋಗ್ಯ ರಕ್ಷಾ ಕವಚ-108 ನೌಕರರ ಸಂಘದ ಜಿಲ್ಲಾ ಘಟಕ ದಾವಣಗೆರೆಯಲ್ಲಿ ದೂರಿದೆ.