ಕಾಂಗ್ರೆಸ್‌ನಲ್ಲಿ ನಾಯಕರ ಮಕ್ಕಳಿಗೆ ಮಾತ್ರ ಅವಕಾಶ: ಭಗವಂತ ಖೂಬಾಕಾರ್ಯಕರ್ತರ ಪಕ್ಷ ಬಿಜೆಪಿ, ಕುಟುಂಬದವರ ಪಕ್ಷ ಕಾಂಗ್ರೆಸ್. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಸ್ವತಃ ಕಾಂಗ್ರೆಸ್ ಶಾಸಕರೇ ಬೇಸತ್ತಿದ್ದಾರೆ. ನಮ್ಮ ಜಿಲ್ಲೆಗಂತೂ ಒಂದು ನಯಾ ಪೈಸೆ ಅನುದಾನ ರಾಜ್ಯದಿಂದ ಕಳೆದ 9 ತಿಂಗಳಲ್ಲಿ ಬಂದಿಲ್ಲ, ಅಭಿವೃದ್ಧಿ ಶೂನ್ಯವಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.