ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಿಸಿ, ವೆಬ್ ಕ್ಯಾಮೆರಾ ಅಳವಡಿಕೆ ಅವೈಜ್ಞಾನಿಕ ಆದೇಶಮಕ್ಕಳು ಪರೀಕ್ಷೆಗಳನ್ನು ನಿರ್ಭೀತಿ, ನೆಮ್ಮದಿ, ಪಾರದರ್ಶಕ ಹಾಗೂ ಪ್ರಶಾಂತ ವಾತಾವರಣದಲ್ಲಿ ಬರೆಯಬೇಕು. ಆದರೆ, ಪರೀಕ್ಷಾ ಮಂಡಳಿ ಆದೇಶದಿಂದ ಮಕ್ಕಳು ಭಯದ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಪರೀಕ್ಷಾ ಮಂಡಳಿ ಪರೀಕ್ಷೆಗೆ ಇನ್ನೂ ಆರು ತಿಂಗಳು ಇರುವ ಮುಂಚೆಯೇ ಶಿಕ್ಷಣ ತಜ್ಞರು, ಸಂಘಟನೆಗಳ ಹಾಗೂ ಸಂಬಂಧಪಟ್ಟರ ಸಭೆ ಕರೆದು ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು.