ಮಾರುಕಟ್ಟೆಗಳಲ್ಲಿ ಅಳತೆ, ತೂಕದಲ್ಲಿ ಮೋಸ: ಬಿ.ಎಸ್.ಮಹೇಶ್ ಕುಮಾರ್ಮನುಷ್ಯ ದುರಾಸೆ ಪ್ರವೃತ್ತಿ ಉಳ್ಳವನಾಗಿದ್ದು, ಲಾಭದ ಉದ್ದೇಶದಿಂದ ಅಂಗಡಿ, ಮಳಿಗೆ, ಮಾರುಕಟ್ಟೆಗಳಲ್ಲಿ ಅಳತೆ ಮತ್ತು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ. ಗುಣಮಟ್ಟದ ವಸ್ತುಗಳನ್ನು ನೀಡದೇ ಗ್ರಾಹಕರಿಗೆ ವಂಚಿಸಲಾಗುತ್ತಿದೆ. ತಿಂಡಿ ತಿನಿಸುಗಳನ್ನು ಕಲಬೆರಕೆ ಮಾಡುವ ಜೊತೆಗೆ ಹೆಚ್ಚು ಬೆಲೆ ಪಡೆದು ಕಡಿಮೆ ಉತ್ಪನ್ನ ನೀಡುತಿದ್ದಾರೆ. ಪೆಟ್ರೋಲ್ ಬಂಕ್‌ಗಳಲ್ಲಿ ದೈನಂದಿನ ವ್ಯವಹಾರದಲ್ಲಿ ಖರೀದಿ ಮಾಡುವಾಗ ಅಳತೆ ಮತ್ತು ಪ್ರಮಾಣ ಕುರಿತು ಗಮನಿಸಬೇಕು.