ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ: ಬಾಲರಾಜುಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಟ್ಟಿ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದಾಗಿ ಮತ್ತು ಜನರಿಗೆ ಆಸೆ ಆಮಿಷವನ್ನು ತೋರಿಸಿ ಜನರನ್ನು ಯಾಮಾರಿಸಿದ್ದರಿಂದಾಗಿ ಬಿಜೆಪಿಗೆ ಹಿನ್ನೆಡೆಯಾಯಿತು. ಈಗ ರಾಜಕೀಯ ಪರಿಸ್ಥಿತಿ ಬೇರೆಯಾಗಿದ್ದು, ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪದೇ ಇರುವ ಕಾರಣ ರಾಜ್ಯ ಸರ್ಕಾರದ ವಿರುದ್ದ ವಿರೋಧಿ ಅಲೆಯಿದೆ. ಅಲ್ಲದೆ ಎಸ್ಸಿ, ಎಸ್ಟಿ ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದಲಿತರಿಗೆ ಉದ್ದಾರಕ್ಕೆ ಮಣ್ಣು ಹಾಕಿ ದ್ರೋಹ ಬಗೆದಿದೆ