ಪಬ್ಲಿಕ್ ಪರೀಕ್ಷೆ ನಡೆಸಿ ಮಕ್ಕಳ ಹಿತ ಕಡೆಗಣನೆ: ಸತೀಶ ಕೊಳೇನಹಳ್ಳಿಮುಂದಾಲೋಚನೆ ಇಲ್ಲದ ಕಾಂಗ್ರೆಸ್ ಸರ್ಕಾರದ ಮೊಂಡುತನದ ನಡೆಯಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತೆ ಬೋರ್ಡ್ ಪರೀಕ್ಷೆ, ಪಬ್ಲಿಕ್ ಪರೀಕ್ಷೆಗಳ ನಡೆಸುವ ಮೂಲಕ ಮಕ್ಕಳು ಖಿನ್ನತೆಗೆ ಒಳಗಾಗುವ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರ ತಂದೊಡ್ಡುತ್ತಿದೆ. ಬೋರ್ಡ್, ಪಬ್ಲಿಕ್ ಪರೀಕ್ಷೆ ನಡೆಸಿಯೇ ತೀರುವುದಾಗಿ ಕಾಂಗ್ರೆಸ್ ಸರ್ಕಾರ ಮೊಂಡುತನ ಮಾಡುತ್ತಾ, ಮಕ್ಕಳ ಹಿತವನ್ನೇ ಸಂಪೂರ್ಣವಾಗಿ ಕಡೆಗಣಿಸುತ್ತಿದೆ.