ಹಾಸನ ಡೈರಿ ಅಧ್ಯಕ್ಷರಾಗಿ ರೇವಣ್ಣ ಅವಿರೋಧ ಆಯ್ಕೆ೧೯೮೫ ರಲ್ಲಿ ನಿರ್ದೇಶಕರಾಗಿ, ೧೯೯೪ ರಿಂದ ಸತತವಾಗಿ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿರುವ ಎಚ್.ಡಿ.ರೇವಣ್ಣ, ೨೦೨೪ ರಿಂದ ೨೦೨೯ ರವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಹದಿನಾಲ್ಕು ಮಂದಿ ನಿರ್ದೇಶಕರ ಸ್ಥಾನಕ್ಕೆ ಈಚೆಗೆ ಚುನಾವಣೆ ನಡೆದಿತ್ತು. ಎಲ್ಲ ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು.