ಭೀಕರ ಬರ ಎದುರಿಸಲು ಸಜ್ಜಾಗಬೇಕು: ಮಧು ಬಂಗಾರಪ್ಪದಾಖಲೆಯ ಪ್ರಕಾರ ಮಲೆನಾಡಿನಲ್ಲಿ ಕಳೆದ 128 ವರ್ಷಗಳಲ್ಲಿ ಮೊದಲ ಬಾರಿಗೆ ಭೀಕರ ಬರ ಎದುರಾಗಲಿದ್ದು, ಅದಕ್ಕೆ ಸಮರೋಪಾದಿಯಲ್ಲಿ ಸಾರ್ವಜನಿಕರು, ಅಧಿಕಾರಿಗಳು ಸಜ್ಜಾಗಬೇಕು. ಮುಂದಿನ ಬೇಸಿಗೆಯ 3 ತಿಂಗಳು ಬರ ಎದುರಿಸಲು ಸರ್ಕಾರ ಸಾಕಷ್ಟು ಏರ್ಪಾಡು ಮಾಡಿದೆ. ಆದರೂ ಸಹ ಜನರು ನೀರನ್ನು ಪೋಲು ಮಾಡಬಾರದು ಎಂದು ಶಿಕ್ಷಣ ಹಾಗೂ ಜಿಲ್ಲಾ ಸಚಿವ ಮಧು ಬಂಗಾರಪ್ಪ ಹೊಸನಗರದಲ್ಲಿಮನವಿ ಮಾಡಿದ್ದಾರೆ.