ಕೊನೆಯಿಲ್ಲದ ದುರಾಸೆಯಿಂದಾಗಿ ಹಗರಣಗಳು ನಡೀತಿವೆ: ನ್ಯಾ.ಸಂತೋಷ ಹೆಗಡೆಬಾಗಲಕೋಟೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಮೃದ್ಧ ಭಾರತ ಕರ್ನಾಟಕ ಬಾಗಲಕೋಟೆ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ, ನೈತಿಕತೆ ಹಾಗೂ ಮಾನವ ಹಕ್ಕುಗಳ ಕುರಿತ ವಿಚಾರ ಸಂಕಿರಣದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಮಾತನಾಡಿ, ದೇಶದಲ್ಲಿ ಒಂದು ದಶಕದಲ್ಲಿ 500 ರಿಂದ 600 ಹಗರಣ ನಡೆಯುತ್ತವೆ. ಇದು ದುರಾಸೆ ಎಂಬ ರೋಗಕ್ಕೆ ಮಿತಿ ಇಲ್ಲದ್ದರ ಪರಿಣಾಮ. ಸಂತೃಪ್ತಿಯ ಬದುಕು ಅಳವಡಿಸಿಕೊಳ್ಳದೆ ಹೋದಲ್ಲಿ ಹಗರಣಗಳಿಗೆ ಕೊನೆ ಇಲ್ಲದಂತಾಗುತ್ತದೆ ಎಂದರು.