ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರ ಸಂಕಷ್ಟ ದೂರ: ವೀಣಾ ಕಾಶಪ್ಪನವರರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚಭಾಗ್ಯ ಯೋಜನೆಗಳಿಂದ ದುಡಿಯುವ ಶ್ರಮಿಕರು, ಬಡವರು, ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದ ಕೋಟ್ಯಂತರ ಕುಟುಂಬಗಳಿಗೆ ಗರಿಷ್ಠ ಸಹಾಯ ನೀಡಿದಂತಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು. ಬನಹಟ್ಟಿಯ ಶ್ರೀಈಶ್ವರಲಿಂಗ ಮೈದಾನದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ನಾರಿಶಕ್ತಿ ಸಮಾವೇಶದಲ್ಲಿ ಮಾತನಾಡಿದರು.