ಜನ ಬಯಸಿದ್ದ ಬದಲಾವಣೆ ತರಲಾಗಿದೆ: ಬಿ.ಜಿ.ಗೋವಿಂದಪ್ಪಆಡಳಿತ ವ್ಯವಸ್ಥೆಗೆ ಚುರುಕು ಮೂಡಿಸಿ ಜನರು ಬಯಸಿದ್ದ ಬದಲಾವಣೆ ತರಲಾಗಿದೆ. ಜನತಾ ದರ್ಶನ ಮಾದರಿಯಲ್ಲಿ, ತಾಲೂಕು ಆಡಳಿತ ವತಿಯಿಂದ ಪ್ರತಿ ಮಂಗಳವಾರ ಗ್ರಾಪಂ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು. ಪಟ್ಟಣದ ಹೊಳಲ್ಕೆರೆ ರಸ್ತೆ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.