ಎಂಬಿಬಿಎಸ್ ಸೀಟ್ ಪಡೆದ ರೋಣದ ವಿದ್ಯಾರ್ಥಿಗೆ ಕೊಪ್ಪಳದ ವ್ಯಕ್ತಿಯಿಂದ ₹ 60 ಸಾವಿರ ನೆರವುನೀಟ್ ಪರೀಕ್ಷೆಯಲ್ಲಿ 556 ಅಂಕ ಪಡೆದು ಚಿಕ್ಕಮಗಳೂರ ಸರ್ಕಾರಿ ಎಂ.ಬಿ.ಬಿ.ಎಸ್ ಕಾಲೇಜಿನಲ್ಲಿ ವೈದ್ಯಕೀಯ ಸೀಟ್ ಪಡೆದ ರೋಣ ಪಟ್ಟಣದ ಬಡ ವಿದ್ಯಾರ್ಥಿ ಗವಿಸಿದ್ದಪ್ಪ ಗದಗಿನಗೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ಕೊಪ್ಪಳ ಪಟ್ಟಣದ ಚಾರ್ಟರ್ಡ್ ಅಕೌಂಟೆಂಟ್ ಸಂಜಯ ವಿರೂಪಾಕ್ಷಪ್ಪ ಕೊತಬಾಳ ಅವರು ₹ 60 ಸಾವಿರ ಆರ್ಥಿಕ ನೆರವು ನೀಡಿದ್ದು, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.