ಕಾಪು: ಪ್ರಥಮ ತೆಂಕ-ಬಡಾ ಕಂಬಳ ಕರೆಗೆ ಗುದ್ದಲಿ ಪೂಜೆಎರ್ಮಾಳು ಗ್ರಾಮದಲ್ಲಿ ಪ್ರಥಮ ಬಾರಿಗೆ ಆಧುನಿಕ ಕಂಬಳ ನಡೆಯಲು ಸಿದ್ಧತೆಗಳಾಗುತ್ತಿದ್ದು, ತೆಂಕ-ಬಡಾ ಜೋಡುಕರೆ ಕಂಬಳದ ಕರೆ ನಿರ್ಮಾಣಕ್ಕೆ ಇಲ್ಲಿನ ಬಡಾಕೊಟ್ಟು ಬಾಕಿಮಾರು ಗದ್ದೆಯಲ್ಲಿ ಗುದ್ದಲಿ ಪೂಜೆ ನಡೆಯಿತು. ವೇದಮೂರ್ತಿ ಬೆಳ್ಮಣ್ ವಿಘ್ನೇಶ್ ಭಟ್ ನೇತೃತ್ವದಲ್ಲಿ ಎರ್ಮಾಳು ಶ್ರೀ ಜನಾರ್ದನ ದೇಗುಲದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ ಪೂಜಾವಿಧಿಗಳನ್ನು ನೆರವೇರಿಸಿದರು.