ರಾಘವೇಂದ್ರ ಸ್ವಾಮಿಗಳ ಆರಾಧನೆ ಆಗಸ್ಟ್ ೧೦ರಿಂದ ಆರಂಭಲಕ್ಷ್ಮೇಶ್ವರ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಬೃಂದಾವನ ಪುರಾತನ ಇತಿಹಾಸ ಹೊಂದಿರುವ ಜಾಗೃತ ಸ್ಥಳವಾಗಿದ್ದು, ಕಲಿಯುಗದ ಕಲ್ಪವೃಕ್ಷವಾಗಿರುವ ರಾಘವೇಂದ್ರ ಸ್ವಾಮಿಗಳ ರಾಯರ ಆರಾಧನೆಯನ್ನು ಪ್ರತಿವರ್ಷ ಆಚರಿಸುತ್ತಿದ್ದು, ಈ ವರ್ಷ ಆ.೧೦, ೧೧ ಮತ್ತು ೧೨ರಂದು ೩೦೫ನೇ ವರ್ಷದ ಆರಾಧನಾ ಮಹೋತ್ಸವವು ಶ್ರೀಮಠದಲ್ಲಿ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಎಲ್ಲ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಶ್ರೀಮಠದ ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ ಹೇಳಿದರು.