ಸರ್ಕಾರಿ ಕೆಲಸಕ್ಕೆ ಕಾಯದೇ ಸ್ಟುಡಿಯೋ ಆರಂಭಿಸಿಪಿಯುಸಿ, ಪದವಿ ಶಿಕ್ಷಣ ಮುಗಿಸಿದ ಕೂಡಲೇ ಎಲ್ಲರಿಗೂ ಸರ್ಕಾರಿ ಕೆಲಸ ಸಿಗಲ್ಲ. ಆದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ನೈಪುಣ್ಯತೆಯಿಂದ ಖಾಸಗಿಯಾಗಿ ಸ್ವತಃ ತಾವೇ ಮಾಲೀಕರಾಗಿ ಸ್ಟುಡಿಯೋ ನಿರ್ಮಿಸಿಕೊಂಡು ಹತ್ತಾರು ಜನರಿಗೆ ಕೆಲಸ ಕೊಡಲು ಸಾಧ್ಯವಿದೆ ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದ್ದಾರೆ.