ಸುತ್ತೂರು ಕ್ಷೇತ್ರದಲ್ಲಿ ಶ್ರಾವಣಮಾಸದ 9ನೇ ದಿನದ ಪ್ರವಚನಮೃದು ವಚನವೇ ಸಕಲ ಜಪಂಗಳಯ್ಯ ಮೃದು ವಚನವೇ ಸಕಲ ತಪಂಗಳಯ್ಯ ಮಾತೇ ಮುತ್ತು, ಮಾತೇ ಮೃತ್ಯು ಎಂಬಂತೆ ಸ್ವರ್ಗ ನರಕಗಳನ್ನು ನಮ್ಮ ಮಾತಿನಿಂದಲೇ ಸೃಷ್ಟಿಸಬಹುದು. ಮಾತು ಮುತ್ತಿನ ಹಾರದಂತೆ ಸರಳ, ಸುಂದರ, ಶುಭ್ರವಾಗಿದ್ದು, ಮಾಣಿಕ್ಯ ದೀಪ್ತಿಯಂತೆ ದಾರಿದೀಪವಾಗಿದ್ದು, ಸ್ಫಟಿಕದಂತೆ ಸುಸ್ಪಷ್ಟವಾದಾಗ ಮಾತ್ರ ಭಗವಂತನು ಮೆಚ್ಚಿ ತಲೆದೂಗುತ್ತಾನೆಂದು ಬಸವಣ್ಣನವರು ನುಡಿದಿದ್ದಾರೆ.