ಕ್ರೀಡಾಪಟುಗಳಿಗೆ ಉಚಿತ ರೈಲು ಸೇವೆ ನೀಡಿ ಬಡ, ಮಧ್ಯಮ ವರ್ಗ, ಗ್ರಾಮೀಣ ಪ್ರತಿಭೆಗಳೇ ಕ್ರೀಡಾ ಸಾಧನೆ ಮಾಡುತ್ತಿದ್ದು, ಇಂತಹವರಿಗೆ ಹೊರ ರಾಜ್ಯಗಳಲ್ಲಿ ಆಯೋಜನೆಗೊಳ್ಳುವ ಕ್ರೀಡಾ ಸ್ಪರ್ಧೆ, ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ರೈಲ್ವೇ ಇಲಾಖೆಯು ಕ್ರೀಡಾಪಟುಗಳಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿ, ಪ್ರೋತ್ಸಾಹಿಸಬೇಕು ಎಂದು ದೂಡಾ ಅಧ್ಯಕ್ಷ, ಕ್ರೀಡಾಪಟುಗಳ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಕೆ.ಶೆಟ್ಟಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು